ನಾನು
ರಚನೆ : ಕೇಶವ ಜೋಶಿ
----------------------------------
ಹಣೆಬರಹವ ತಿದ್ದಿ ತೀಡಲಾಗದ ನಾನು ಬರೆಯುತಿರುವೆ ನನ್ನಂಗಳದ ಪದಗಳನು.. ಎಲ್ಲಿರುವುದೋ ಎಂತಿರುವುದೋ ಅರಿಯದ ಜೀವನದ ಪುಟಗಳನು.. ನಿಂತ ನೀರಾಗುವುದೋ ಹರಿವ ನದಿಯಾಗುವುದೋ ತಿಳಿಯದ ಮನುಜನು ನಾನು... ಮಾತು ಬಾರದ ಮೌನಿಯಾಗುವೇನೋ ವಟಗುಡವ ಕಪ್ಪೆಯಾಗುವೇನೋ ತಿಳಿಯದ ಜೀವಿ ನಾನು... ಅನ್ಯರಿಗೆ ಒಳಿತಾಗುವೆನೇನೋ ಸಮಾಜದ ನಿರೂಪಯೋಗಿಯಾಗುವೆನೇನೋ ಮಾನವೀಯತೆಯ ಬಿಂಬವಾದರೆ ಸಾಕು ನಾನು...
----------------------------------
ನೋಂದಣಿ ಐಡಿ : KPF-S1-5986
