ಆ ಕ್ಷಣ
ರಚನೆ : ನೀಲಕಂಠ ಎಂ
----------------------------------
ಕಾತರದ ಆಗಮನ, ನೋಡಲೆಂದು ಹರುಷದಾ ಮಿಲನ ಆಯಿತಿಂದು ಆನಂದದ ನೋಟಗಳ ಸೆಳೆತ ಮಧುರ ಸ್ಪರ್ಶದ ಕೖಕುಲುಕಾಟ ಎದೆಯ ಭಾವಗಳಿಗೆ ಬಂತು ರೆಕ್ಕೆ ಹಾರಾಡಿತು ಮನವಾ ಸೇರಲೆಂದು ದೇಹದಾ, ಮನದಾ ನೋವ ಮರೆತು ನಗೆಯಲ್ಲೆ ಹಂಚಿಕೆಯಾಯಿತು ಎಲ್ಲಾ ಹೊತ್ತು ಹೋದದ್ದು ತಿಳಿಯಲಿಲ್ಲ ಮರಳುವ ಗಳಿಗೆ ಹತ್ತಿರವಾಯಿತು ಮತ್ತೆ ಸೇರೋಣವೆಂಬ ಹಾರೖಕೆಯಿಂದ ದೂರವಾಯಿತು ಒಲ್ಲದ ಮನಸಿಂದ
----------------------------------
ನೋಂದಣಿ ಐಡಿ : KPF-S1-5982
