Submission 22221

ಕೂಗಿ ಮಾರುವವರ ನಡುವೆ ಮೌನ ಹಾಸಿ ಕೂತವ ನಾನು

ರಚನೆ : ಸಂತೆಬೆನ್ನೂರು ಫೈಜ್ನಟ್ರಾಜ್

----------------------------------

ಬದುಕು ಸಂತೆ ...ಸಂತೆ ತುಂಬಾ ಸರಕು... ನಾನು ಒಂದು ಮೂಲೆಲಿ ಕೂತಿದ್ದೇನೆ ಒಂದಿಷ್ಟು ಪದಗಳ ರಾಶಿ ಹಾಕಿ ಗಿರಾಕಿಗಳಿಗೆ ಖುಷಿ, ಸಂಕಟ, ಬೇಸರ, ಅಸೂಯೆ ನಗು, ಅಳು, ಜಿಗುಪ್ಸೆ, ಕೋಪ, ಪ್ರೀತಿ ಹೀಗೆ ಎಂತೆಂತವೋ ಗೊತ್ತಿರುವ ಪರಿಚಿತ ಪದಗಳೆ! ಬಂದವರು ನೋಡಿ ನಕ್ಕು ಹೋದರು , ಪರೀಕ್ಷಿಸಿ ಕೆಲವರು ಕೂಗಿ ಕೂಗಿ ಮಾರೋರ ನಡುವೆ ಮೌನ ಹಾಸಿ ಕೂತವ ನಾನು ಒಂದು ಅಜ್ಜಿ ಬಂದು ಜಿಗುಪ್ಸೆ ಖರೀದಿಸಿ ಭಾರ ಹೆಜ್ಜೆಲಿ ಸಾಗಿತು ಹುಡುಗ ಬಂದವನೇ ಖುಷಿ ಎತ್ತಿಕೊಂಡು ಓಡಿದ ಚಿಲ್ಲರೆ ಪಡೆಯದೇ ಪುಟ್ಟ ಮಗು ನಗು ಮುಟ್ಟಿ ನೋಡಿ ಚೂರು ಕಡಿಮೆ ಇದೆ ಅಂತ ಹಳೆ ನೋಟಿಟ್ಟು ಹೋಯಿತು ಸಂಜೆ ವೇಳೆಗೆ ಪದಗಳು ಎಲ್ಲಾ ಖಾಲಿ .ಒಂದು ಬಿಟ್ಟು... ಅರಿಗಾಗದ, ಅವರಲ್ಲಿಲ್ಲದ ಪದ ಯಾರಿಗೋ.. ಪ್ರಯೋಗಿಸಲೋ... ಒಯ್ದರು ಪ್ರೀತಿ ಪದ ನನ್ನನ್ನೇ ನೋಡುತ್ತಿತ್ತು ಎತ್ತಿ ಹೃದಯ ಜೇಬಿಗಿಟ್ಟೆ..ಇಡೀ ಜಗತ್ತು ನಂದೆನಿಸಿತು ಸಂತೆ ಮುಗಿಯೋತನಕ ಜಗದ ಜನರಿಗೆ ಸುಮ್ಮನೆ ಹಂಚೋಣಂತ..... ಹೊರಟೆ ಸಂತೆ ಮುಗಿದಿಲ್ಲ; ಜನ ಪದಗಳ ಹುಡುಕುತ್ತಲೇ ಇದ್ದಾರೆ.. ಪ್ರೀತಿ ಪದ ಖರೀದಿ ಬಾಕಿ ಇದೆ...

----------------------------------

ನೋಂದಣಿ ಐಡಿ : KPF-S1-5976

1
Total Votes
17
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!