ಮರಳಿ ಬರದಿರು ಬಾಳಿಗೆ
ರಚನೆ : ರಾಘವೇಂದ್ರ ಲಮಾಣಿ
----------------------------------
ಮಾಯಾಗಾತಿಯೇ ಮಾಯಾಗಾತಿಯೇ ಮಾಯಾ ಎಂಬ ಬಲೇ ಬೀಸಿ ಪ್ರೀತಿ ಎಂಬ ಮೋಡಿ ಮಾಡಿ ಬಿಟ್ಟು ಹೋಗಿ ಹೃದಯಕ್ಕೆ ಗಾಯಾ ಮಾಡಿದವಳೇ ಮತ್ಯಾಕೆ ಆಶ್ರಯ ಹುಡುಕುತ ಬಂದಿರುವೆ. ಮಾತಿನಲ್ಲೇ ಕರಗಿಸುವವಳೆ ನೋಟದಲ್ಲೇ ತಗ್ಗಿಸುವವಳೆ ಪ್ರೀತಿಯಲ್ಲಿ ಮುಳಗಿಸುವವಳೆ ನನ್ನ ಪ್ರೀತಿಯನ್ನು ದೂಡಿ ಹೋದವಳೆ ಮತ್ಯಾಕೆ ನನ್ನನ್ನು ಹುಡುಕುತ ಬಂದಿರುವೆ. ನೀನೇ ನನಗೆ ಮೋಡಿ ಮಾಡಿದೆ ಕಣೆ ನೀನೇ ನನ್ನ ತಳ್ಳಿದಿ ಹೆಣ್ಣೆ ಹಾರಾಡುತ್ತಿರುವ ಜೀವವನ್ನು ಮಾಡಿದೆ ತನ್ನಣೆ ಜೀವನವನ್ನೇ ಬೇಸರ ಮಾಡಿದ ಕಣ್ಮಣಿಯೇ ಮತ್ಯಾಕೆ ನಾ ನಿನಗೆ ಬೇಕಾದೆ.
----------------------------------
ನೋಂದಣಿ ಐಡಿ : KPF-S1-5968
