ಹೊಸ ಬಾಳಿನ ಹೊಸಿಲಲಿ
ರಚನೆ : ಶರ್ಮಿಳಾ ಎಸ್
----------------------------------
ವರನಿಗಾಗಲಿ ಉಪಚಾರ; ಬಳುವಳಿ ಕಾಶಿ ಪೀತಾಂಬರ; ಅಡವಿಟ್ಟುಕೊಳ್ಳಿ ಅವನಾದರ; ನಿಮ್ಮಾಚಾರ ವೃದ್ಧಿಸಲಿ ಹೊಸಿಲಾಬದಿಯಲ್ಲಿ... ವರನ ಬಳಗವೆಲ್ಲರ ಆತಿಥ್ಯ - ಕೊಂಕಿಲ್ಲದೆ ಸಾಗಲಿ ಸಧ್ಯ- ನೋಯಬಾರದಿವರು, ನಾಳೆ ಇವ ಟಿಸಿಲೊಡೆದು ಇವಳೊಡನೆ ಗೂಡ್ಹೂಡಿದಾಗ... ಸೇರಕ್ಕಿ-ಬೆಲ್ಲ ಚೆಲ್ಲುತ್ತಾ ಬರುವ ಲಕ್ಷ್ಮಿ ಯ ಮನೆ ತುಂಬಿಸಿಕೊಳ್ಳಿ; ತವರಿಂದ ತರುವ ಇಟ್ಟಿಗೆಯಿಂದ ಕಟ್ಟೋ ಮನೆ ಹೆಸರು ನಿಮ್ಮದೇ ಆಗಿರಲಿ...
----------------------------------
ನೋಂದಣಿ ಐಡಿ : KPF-S1-5953
