ಮಾರಾಟಕ್ಕಿದೆ ಮನಸ್ಸು
ರಚನೆ : ಲಕ್ಷ್ಮೀಕಾಂತ್ ಎಲ್. ವಿ.
----------------------------------
ಸಂತೆಯಲ್ಲಿ ಮನವನಿಟ್ಟೆ ಮಾರಲು, ಬಗೆಬಗೆಯ ಯೋಚನೆಗಳ ರಾಶಿ ಹಳೆಯ ನೆನಪುಗಳ ಕಂತೆ ಕಂತೆ ನೋವಿನ ಕಡಲು, ನಲಿವಿನ ಅಲೆಗಳು ಕಷ್ಟದ ಕಲ್ಲುಗಳು, ಸುಖದ ಹೂಗಳು.. ತಿಳಿವಿನ ಬೀಜಗಳು, ಅಜ್ಞಾನದ ಮುಳ್ಳುಗಳು ಪ್ರಶ್ನೆಗಳ ಸುಳಿಗಳು, ಉತ್ತರಗಳ ಹುಡುಕಾಟ ಯಾರು ಕೊಳ್ಳುವರಿಲ್ಲ ಈ ಮನವ? ಎಲ್ಲರೂ ತಮ್ಮದೇ ಚಿಂತೆಗಳಲ್ಲಿ ಮಗ್ನ ಒಂಟಿಯಾಗಿ ನಿಂತಿದೆ ನನ್ನ ಮನವು.. ಏನು ಬೆಲೆ ಕಟ್ಟುವರೋ ಈ ಮನಕೆ? ಅಳತೆಗೋಲಿಗೆ ಸಿಗದ ಭಾವನೆಗಳ ತೂಕ ಹಾಕುವ ಬಗೆಯಾದರೂ ಹೇಗೆ? ಹಾಗೆಯೇ ನಿಲ್ಲಲಿ ಸಂತೆಯ ಧೂಳಿನಲಿ ಬಂದು ಕೊಂಡುಕೊಳ್ಳಲಿ ಈ ಮನವ..
----------------------------------
ನೋಂದಣಿ ಐಡಿ : KPF-S1-5950
