ನಾನೊಬ್ಬ ಗುಲಾಮನು
ರಚನೆ : ಲಕ್ಷ್ಮೀಕಾಂತ ಕಲಾಲ್
----------------------------------
ಅನ್ಯಾಯದ ಆಳಾಗಿ ದುಡಿದೇನು, ಲಂಚರ ಕಾಲು ಬಿದ್ದೇನು ಹಾರಿದ ಪರಿಮಳದಲಿ ಮಾಸಿದ ಬಣ್ಣದಲ್ಲಿ ಪಾಪಿಯಂತೆ ಕಂಡೇನು ಯಾರಿಗೂ ತಿಳಿಯದಂತೆ ದೂರ ಸರಿದು ನಿಂತೇನು - ನಾನೋಬ್ಬ ಗುಲಾಮನು ಗರಿಕೆಯ ಹೊತ್ತರು ನಲಿವಿಲ್ಲದ ಕಾಯವಿದು ಬರಿಗಾಲಲ್ಲಿ ಬಂದು ಕುಳಿತು ಗಟಗಟ ನೀರ ಕುಡದೇನು, ಹರಕ ಮುಳ್ಳ ಧರಸೇನು ಶಿಕ್ಷಣದ ಪಾಟಿ ಹಿಡಿಯಲಾರದ ಬದುಕು ನನ್ನದು - ನಾನೋಬ್ಬ ಗುಲಾಮನು ರಾಜಕೀಯ ಬಯಲಾಟಕ್ಕೆ ರಂಗು ನಾನಾದೆ ಪುಂಡಾಟವಾಡುವ ಪುಂಡರ ಆದಾಯವಾದೆ ರಂಗೇರಿದೆ ಕನಸು ಕಂಡೆ, ಅದು ನನಸಾಗದೆ ಸೋತು ಕುತೇ ರಂಗೇರಿದ ಕತ್ತಲಲ್ಲಿ ಜ್ಞಾನದ ಬೆಳಕು ಕಾಣಲಾದೆ ಅರಿಯದ ಮೂರ್ಖರಲ್ಲಿ - ನಾನೋಬ್ಬ ಗುಲಾಮನಾದೆ
----------------------------------
ನೋಂದಣಿ ಐಡಿ : KPF-S1-5944
