Submission 22163

ರೈತ

ರಚನೆ : ಸಂತೋಷ್ ಬಿದರಗಡ್ಡೆ

----------------------------------

ನೇಗಿಲ ಹಿಡಿದು ಬಾಗಿದ ದೇಹದಿ ನೂರ್ಮಡಿ ಬಲದ ಜೋಡೆತ್ತ ಹೂಡಿ ಹೊಲವನು ಹಸನು ಮಾಡುವವನೇ... ರಾತ್ರಿಯೇ ನಾಳಿನ ಕೆಲಸವ ನೆನೆದು ಗಟ್ಟಿ ರೊಟ್ಟಿ ಕಟಕೊಂಡು ಬಂದು ಹೊತ್ತುಟ್ಟುತ್ತಲೇ ಹೊಲ ಸೇರುವವನೇ... ಬಡ್ಡಿಸಾಲ ಬೀಜ ಗೊಬ್ಬರ ತಂದು ಆಳಕಾಳುಗಳ ಜೊತೆ ಕೆಲಸ ಪಡೆದು ಬರಡು ಭೂಮೀಲಿ ನೀರ್ಬಸಿದವನೇ... ಮುಗಿಲ್ನೋಡಿ ಮಳೆರಾಯ್ನ ಬೇಡಿ ಬೆಳೆ ಪೈರಿಗೆ ನೀರುಣಿಸುವೆ ಹೋರಾಡಿ ಹಸ್ತಾದಿ ಕಳೆ ಕಿತ್ತು ಎಡೆ ಹೊಡೆವವನೇ... 'ಶ್ರಮಯೇವ ಜಯತೇ' ನಿನ್ನ ತಂತ್ರ 'ಕಾಯಕವೇ ಕೈಲಾಸ' ಬಸವ ಮಂತ್ರ ಆದರೂ ವಿಧಿ ಕೈಗೊಂಬೆಯಾಗುವವನೇ...

----------------------------------

ನೋಂದಣಿ ಐಡಿ : KPF-S1-5938

70
Total Votes
369
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!