ಸೋಲನ್ನು ನೀ ಸೋಲಿಸಿ ಬಿಡು
ರಚನೆ : ಗುರುಮೂರ್ತಿ
----------------------------------
ಗೆದ್ದವನಿಂದ ಗೆಲುವನ್ನು ಕಸಿಯುವ ತನಕ ಆರದಿರಲಿ ನಿನ್ನೊಡಲ ಕೆಚ್ಚು ಗೆಲುವಿಗೇ ಸೋಲನು ಉಣಬಡಿಸುವ ತನಕ ಅರೆ ಹೊಟ್ಟೆಯಲಿ ನೀ ದಿನ ದೂಡು ಕನಸು ನುಚ್ಚು ನೂರಾದರೇನು ಕಣ್ಣರೆಪ್ಪೆಯ ನೀ ಮುಚ್ಚದಿರು ಪರಿಶ್ರಮವ ನೀ ಬಿಡದಿರು ಸೋಲು ಶಾಶ್ವತವಲ್ಲ ಗೆದ್ದವ ನೂರು ಬಾರಿಯೂ ಗೆಲ್ಲಲು ಹಾತೊರೆಯಬೇಕು ನೂರು ಸೋಲುಗಳನ್ನು ಕಂಡವನ ಒಂದು ಗೆಲುವು ಜಗತ್ತನ್ನೇ ಬುಡಮೇಲು ಮಾಡಬಲ್ಲದು ಸೋಲು ಕಲಿಸಿತು ಸಾವಿರ ಪಾಠವ ಗೆದ್ದಾಗಲೊಮ್ಮೆ ಸೋತವನ ತಂತ್ರ ಕುತಂತ್ರಗಳ ಅರಿಯುವ ಸಾಮರ್ಥ್ಯ ನಿನಗುಂಟು ಸೋಲನ್ನೇ ನೀ ಸೋಲಿಸಿ ಬಿಡು ಸೋಲೆ ನಿನ್ನ ಮುಂದೆ ಶರಣಾಗಿ ಬಿಡಲಿ ಸೋಲೆ ಗೆಲುವಿನ ಮೆಟ್ಟಿಲಾಗಲಿ
----------------------------------
ನೋಂದಣಿ ಐಡಿ : KPF-S1-5913
