ಭಾರತಾಂಬೆ
ರಚನೆ : ಪರಶುರಾಮ ಮಾಳೂದೆ
----------------------------------
ಭಾರತಾಂಬೆ ನಿನ್ನ ಒಡಲಲಿ ಭಾರವಾದ ಮನವ ನುಡಿಯಲು ಬೇರೆಯಾದ ಬೇದ ಭಾವವು ನರರ ಮಧ್ಯೆ ನಡೆಯುತ್ತಿರಲು. ಅ ಎದ್ದು ಬಂದು ಬುದ್ಧಿ ಹೇಳು ಹದ್ದು ಬಸ್ತಿನಲ್ಲಿ ನಡೆಸು ಹದ್ದು ಕಾಗಿ ಬಡೆದು ತಿನ್ನಲು ಎದ್ದು ಬಂದು ತಿದ್ದಿ ಹೇಳು ಆ ಜಾತಿ ಮತ ಧರ್ಮದಲ್ಲಿ ನೀತಿ ನಿಯಮ ಮರೆತರಿಲಿ ಸೋತ ಜನರ ಬದುಕಿನಲ್ಲಿ ಸ್ವಾರ್ಥಕತೆಯ ಮೆರೆದರಲ್ಲಿ ಇ ನಿನ್ನ ಬರುವಿಕೆಗಾಗಿ ಕೂತು ನಿನ್ನ ಮಕ್ಕಳ ಆಸೆ ಹೊತ್ತು ನಿನ್ನ ದರ್ಶನ ಯಾಕೆ ಹೂತ್ತ ನೀನು ಬೇಗ ಬಾ ಮತ್ತು ಈ ಬೇದ ಭಾವ ಅಳಿಸಿ ನೀನು ಅಂದ ಚಂದದಿ ನಡಿಸು ನೀನು ಬೆಂದ ಮನಗಳ ಮಾತೃ ನೀನು ಬಂದು ಪ್ರೀತಿಯ ಹಂಚು ನೀನು ಉ
----------------------------------
ನೋಂದಣಿ ಐಡಿ : KPF-S1-5884
