ನನ್ನಪ್ಪ ದೇವರಂತವನು
ರಚನೆ : ಮಲ್ಲಿಕಾರ್ಜುನ ಗದ್ದೆಪ್ಪ ಚೌಡಕಿ
----------------------------------
ನನ್ನಪ್ಪ ಕೋಪವಂತವನು ಆದರೆ ಅವನ ಪ್ರೀತಿ ಸಮುದ್ರದಷ್ಟು ಆಳ, ನನ್ನಪ್ಪ ಬೆಳಗಾದರೆ ಬೈಯುವಂತವನು ಆದರೆ ಅವನ ಮೇಲಿರೋ ಜವಾಬ್ದಾರಿ ಭೂಮಿಯಷ್ಟು ಭಾರ, ನನ್ನಪ್ಪನ ಪ್ರೀತಿ ಕಣ್ಣಿಗೆ ಕಾಣದಂತಹದು ಆದರೆ ಎಲೆಯ ಮರಿಯ ಕಾಯಂತೆ, ನನ್ನಪನ ಮನಸ್ಸು ಬಂಗಾರವಂತಹದು ಆದರೆ ವಜ್ರಕ್ಕಿಂತ ಗಟ್ಟಿಯಾಗಿತ್ತಂತೆ, ನನ್ನಪ್ಪ ಎಲ್ಲರ ವಿರೋಧಿ, ಆದರೆ ಅವನು ಯಾರಿಗೂ ಶತ್ರುವಾಗಿಲ್ಲವಂತೆ, ನನ್ನಪ್ಪನ ಮಾತು ಸರ್ವಾದೇಶವಂತೆ ಆದರೆ ಕೇಡಕಿನ ಗುಣ ಅವನಿಗಿಲ್ಲವಂತೆ, ನನ್ನಪ್ಪನ ನೆರಳು ಜೊತೆಗೆ ಇಲ್ಲ ಆದರೆ ಅವನ ಆತ್ಮ ಅಮರವಂತೆ ಅಮರವಂತೆ
----------------------------------
ನೋಂದಣಿ ಐಡಿ : KPF-S1-5871
