Submission 22071

ಆಧುನಿಕ ವಚನಗಳು

ರಚನೆ : ವರಲಕ್ಷ್ಮಿ

----------------------------------

ವಸುದೈವ ಎನ್ನುವನು ನೀನಯ್ಯ ವಸುದೈವಕುಟುಂಬಕಂ ಅರ್ಥವೇ ನೀನಯ್ಯ ಶ್ರೀ ಮಧುಸೂದನ ಸಾಯಿಶ್ವರ ಈ ಜಗಕೆ ಅಣ್ಣಪೂರ್ಣೇಶ್ವರಿಯೇ ನೀನಯ್ಯ ತಾಯಿಯಾದರೂ ಗರ್ಭದಲ್ಲಿರಿಸಿ ಪೋಷಿಸುವಳು ತಂದೆಯಾದರು ಬೆವರುಸುರಿಸಿ ಸಲುಹುವನು ಶ್ರೀ ಮಧುಸೂದನ ಸಾಯಿಯೆ ಹೃದಯದಲ್ಲಿರಿಸಿ ಪೋಷಿಸುವನು ನಿನೊಬ್ಬನಯ್ಯ ಜ್ಞಾನದಾನವೆ ನೀನಯ್ಯ ಸತ್ಯರೂಪವು ನೀನಯ್ಯ ಶ್ರೀ ಮಧುಸೂದನ ಸಾಯಿಯೇ ಈ ವಿಶ್ವದಕುಟುಂಬಕ್ಕೆ ಪ್ರೀತಿ ಅಮೃತವನ್ನು ಉಣಿಸುವೆಯಯ್ಯ ನಮಗಾಗಿ ಪ್ರೇಮಮಯಿಯಾಗಿರುವವನು ನೀನಯ್ಯ ಹೃದಯದ ಭಾಷೆಗೆ ಸ್ಪಂದಿಸುವನು ನೀನಯ್ಯ ಶ್ರೀ ಮಧುಸೂದನ ಸಾಯಿಯೇ ಈ ಜಗತ್ತನ್ನೇ ಸನ್ಮಾರ್ಗದಿ ನಡೆಸಬಂದ ಗುರು ನೀನಯ್ಯ ಶ್ರೀ ಸಾಯಿ ನಡೆಸಬಂದ ಗುರು ನೀನಯ್ಯ

----------------------------------

ನೋಂದಣಿ ಐಡಿ : KPF-S1-5867

123
Total Votes
408
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!