ಒಲವ ಸಮ್ಮತಿ
ರಚನೆ : ಸಿಂಧು ಕೆ.ಎನ್
----------------------------------
ನವಿರಾದ ಇಳಿ ಸಂಜೆಯಲಿ ನೀ ಸೊಕುವೆಯ ತಂಗಾಳಿಯಾಗಿ ಏಕಾಂತದಲ್ಲಿ ನಾ ನಭವ ನೋಡುವಾಗ ನೀ ಬರುವೆಯಾ ಚಂದಿರನಾಗಿ ನೆನಪಿನ ಪುಟಗಳ ನಾನೊದುವಾಗ ನೀ ಉಳಿಯುವೆಯಾ ಮಾಸದ ಸವಿ ನೆನಪಾಗಿ ನಿನ್ನೊಲವ ಮಿಡಿತ ನಾನಾಗೂವಾಗ ನೀ ಇರುವೆಯ ನನ್ನೆದೆ ಬಡಿತವಾಗಿ ನೋವಲ್ಲೂ ನಲಿವಲ್ಲೂ ಕನಸಲ್ಲೂ ನನಸಲ್ಲೂ ಕೊನೆಗೆ ಸಾವಲ್ಲೂ ಜೊತೆಯಾಗಬಲ್ಲೇನ ಒಪ್ಪಿ ಅಪ್ಪಿ ಸಮ್ಮತಿಸಿ ಸ್ವಗತಿಸುವೆಯ ಎನ್ನ ನಿನ್ನ ಮನದರಸಿಯಾಗಿ ...
----------------------------------
ನೋಂದಣಿ ಐಡಿ : KPF-S1-5858
