ಪ್ರೀತಿಯ ಪ್ರತಿ.
ರಚನೆ : ಕನ್ನಡದ ಕವಿ.
----------------------------------
ಪ್ರೀತಿ ತಿಳಿಯದ ಈ ಹೃದಯಕೆ ಪ್ರೀತಿಯಾದವಳು, ಪ್ರೀತಿಯ ಅರಿವಿಲ್ಲದೆ ಪ್ರೀತಿಸಿದ ಹುಡುಗನ ಭಾವನೆಗಳಿಗೆ ಕವಿತೆಯ ಪ್ರತಿಯಾದವಳು, ಸಿಟಿ ಬೆಡಗಿಯ ಬಳುಕನ್ನು, ಹುಣ್ಣಿಮೆ ಚಂದ್ರನಂತಿರುವ ತಳುಕನ್ನು ನೋಡಿ, ಬೆಳ್ಳಿ ಮನಸ್ಸಿನ ಹಳ್ಳಿ ಹುಡುಗಿಯೆಂದು ಹುಣ್ಣಿಮೆ ರಾತ್ರಿಗೆ ಹೋಲಿಸಿದ, ಯುವಕನ ಬದುಕಿಗೆ ಅಮವಾಸ್ಯೆಯಾದವಳು, ಆಗಾಗ ಪ್ರೀತಿಯ ನೆಪದಲ್ಲಿ ನೆನಪಾಗಿ ಕಣ್ಣಲ್ಲಿನ ಕಣ್ಣೀರಿಗೆ ಕಾರಣವಾದವಳು ಅವಳೇ,, ನನ್ನವಳು....
----------------------------------
ನೋಂದಣಿ ಐಡಿ : KPF-S1-5847
