ಅಮ್ಮ ನೀ ಏಕೆ ಮೌನಿಯಾದೆ?
ರಚನೆ : ರಮೇಶ ಸಿದ್ದಲಿಂಗಯ್ಯ ಮಠಪತಿ
----------------------------------
ಕತ್ತಲು ತುಂಬಿದ ಗರ್ಭದಲ್ಲಿ. ನಿನ್ನ ಉಸಿರಿನ ಬೆಳಕನ್ನು ಚೆಲ್ಲಿ. ನಿನ್ನ ಕರುಳನ್ನೇ ರಕ್ಷಾ ಕವಚ ಮಾಡಿದೆ. ನವಮಾಸಗಳ ನಿನ್ನ ಬಯಕೆಯ ದೂಡಿದೆ. ಆದರೂ ಅಮ್ಮ ನೀ ಏಕೆ ಮೌನಿಯಾದೆ.? ಬೆಳಕು ತುಂಬಿದ ಪ್ರಪಂಚಕ್ಕೆ ನನ್ನನ್ನು ನೀಡಿದೆ. ನಿನ್ನ ಎದೆ ಹಾಲಿನ ಅಮೃತ ಉಣಿಸಿದೆ. ಅಮ್ಮ ಅನ್ನೋ ತೊದಲು ನುಡಿ ಕಲಿಸಿದೆ. ಒಳ್ಳೆ ನಡತೆ, ವಿದ್ಯೆ ಬುದ್ಧಿಯನ್ನು ನೀಡಿದೆ. ಕೊನೆಗೆ ಸುಂದರ ಮೂರ್ತಿಯಾಗಿ ರೂಪಿಸಿದೆ. ಆದರೂ ಕೊನೆಗೂ ನೀ ಏಕೆ ಮೌನಿಯಾದೆ? ಮೌನಿಯಾದೆ?..ಮೌನಿಯಾದೆ?..
----------------------------------
ನೋಂದಣಿ ಐಡಿ : KPF-S1-5843
