Submission 22019

ಅಂತರಂಗದ ಜ್ಯೋತಿ

ರಚನೆ : ಎ ಎಸ್. ಮಕಾನದಾರ

----------------------------------

ತಲೆ ಬಾಗಿಲಿಗೆ ಕೈಹಚ್ಚಿ ಕಾಯುತಿರುವೆ ಪ್ಯಾರಿ ಭಾವರಸ ನೊರೆಹಾಲು ತುಂಬುತ್ತಿರುವೆ ಪ್ಯಾರಿ ಅಚ್ಚೇರು ಬಂಗಾರದಲಿ ಅಚ್ಚು ಒತ್ತುತ್ತಿರುವೆ ಸ್ನೇಹ ಅಚ್ಚು ಮೆಚ್ಚೆ0ದು ಸಾರುತಿರುವೆ ಪ್ಯಾರಿ ಹಾಯಿದೋಣಿಗೆ ನಾವಿಕನಾಗಿ ಸಾಗುತ್ತಿರುವೆ ಚೂರಾದ ಹೃದಯ ತೋರಣಕಟ್ಟಿರುವೆ ಪ್ಯಾರಿ ನದಿಗಳ ಜಾಡಿನೊಳಗೆ ಚಹರೆ ಕಾಣುತಿರುವೆ ವಿಶ್ವ ಪ್ರೇಮ ಬಾವುಟ ಹಾರಿಸುತ್ತಿರುವೆ ಪ್ಯಾರಿ ಅಂತರಂಗ ಜ್ಯೋತಿಗೆ ಧೋಖಾ ಮಾಡದಿರು ಆಶೀಕ್ ಮಸ್ತಕಕ್ಕೆ ಇಳಿದುಬಾ ಬೇಯುತಿರುವೆ ಪ್ಯಾರಿ

----------------------------------

ನೋಂದಣಿ ಐಡಿ : KPF-S1-5832

9
Total Votes
57
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!