ಅವಳು
ರಚನೆ : ನಿರ್ಮಲಾ ಮೇಟಿ
----------------------------------
ಅವಳೊಂದು ಸಹನೆಯ ದಿವ್ಯ ಶಿಖರ ಶಾಂತ ಮಹಾಸಾಗರ ಅವಳೊಂದು ವಿಸ್ತಾರ ಅಂಬರ ತಾಯ್ತನದ ವಸುಂಧರ ಅವಳೊಂದು ಮಮತೆಯ ಹಂದರ ಕರುಣೆಯ ಗೋಪುರ ಅವಳೊಂದು ಪ್ರೀತಿಯ ಸಂವತ್ಸರ ಸ್ನೇಹದ ಮನ್ವಂತರ ಅವಳೊಂದು ತ್ಯಾಗದ ಸಾಕ್ಷಾತ್ಕಾರ ಬಂಧನದ ಭಾವಾಂತರ ಅವಳಿಗೆ ಅವಳೆ ಉಪಮೇಯ ಉಪಮಾನ ಉಪಮಾಲಂಕಾರ
----------------------------------
ನೋಂದಣಿ ಐಡಿ : KPF-S1-5819
