Submission 21973

ಪ್ರೇಮದ ಕಲೆ

ರಚನೆ : ಕೃಷ್ಣ ಮುರಾಗ್

----------------------------------

ಮತ್ತೇರುವಷ್ಟು ಹತ್ತಿರವಾದೆ, ಗೆಳೆಯ ಸ್ನೇಹವೋ, ಪ್ರೇಮವೋ, ಮತ್ತಾವ ತೀರವೋ ? ತೇಲುತಿಹ ತೆಳ್ಳನೆಯ ಕೆನೆಯು ನಾನು ನೀ ನನ್ನ ಹೊತ್ತ ಆ ಕ್ಷೀರವೋ ? ಗೆಜ್ಜೆಯ ಸದ್ದಲಿ ಮದ್ದ ಕಂಡೆ ನಿನ್ನ,ಗೆಳತಿ... ಬಳೆಯಲಿ ಪ್ರೀತಿಯ ಕಲೆಯ ಕಂಡೆ, ಹಣೆಯ ಬೊಟ್ಟಿನಲಿ ಒಲವು ಹುಟ್ಟಿ ನಿನ್ನ ಕಳೆಯಲಿ ಇಂದು ಇಳೆಯ ಕಂಡೆ ಎಷ್ಟು ಪ್ರೀತುಸುವೇ ಕೇಳುವೆಯಾ ಹುಡಗ ಪ್ರತಿ ಬಡಿತದಲಿ ನೀ ಬಂದು ಬೆರೆವೆ ಇನ್ನೇನು ಬಣ್ಣಿಸಲಿ ಹೇಳು ಹೃದಯ ರುಧಿರ ಜೊತೆ ನೀನೂ ಹರಿವೆ ನೀನಿರು ಇರದಿರು, ಗೆಳೆಯ ನಿನಗಾಗಿಯೇ ನಾ ಕಾಯುವೆ ನಾನಿದ್ದು ಸತ್ತ ಮೇಲೂ, ನಿನಗಾಗಿಯೇ ನಾ ಸಾಯುವೆ

----------------------------------

ನೋಂದಣಿ ಐಡಿ : KPF-S1-5800

0
Total Votes
10
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!