ನಾನು ಕನ್ನಡದ ಕಂದ
ರಚನೆ : ಮಾಳಪ್ಪ .ಎಂ.ಡಿ
----------------------------------
ಕನ್ನಡದ ತೇರು ಎಳೆಯೋಣ ಜೋರು ಇಲ್ಲಿರುವ ಎಲ್ಲರೂ ದಿಗ್ಗಜರು ನಾನು ಇದರಲ್ಲಿರುವ ಒಂದು ಕರು ನಮ್ಮ ಕನ್ನಡ ಸಾಹಿತ್ಯ ಇದಕ್ಕೆ ಗಣಪರಂಪರೆ ಇರುವುದು ಸತ್ಯ ಈ ಜ್ಯೋತಿ ಬೆಳಗುತಿರಲಿ ನಿತ್ಯ ನವಕವಿಗೆ ಹೊಂಗಿರಣವಾಗಲಿ ಈ ಸಾಹಿತ್ಯ ಓ ಕನ್ನಡ ತಾಯಿಯೇ..... ಜ್ಞಾನ ಸಾಗರ ನೀನು ಒಂದು ಹನಿ ನಾನು ಮೇರುಪರ್ವತ ನೀನು ಒಂದು ಕಣ ನಾನು ವಟವೃಕ್ಷ ನೀನು ಒಂದು ಚಿಗುರು ನಾನು ಸುಧೆಯುಣಿಸು ನೀನು ಹೆಮ್ಮರವಾಗುವೆ ನಾನು
----------------------------------
ನೋಂದಣಿ ಐಡಿ : KPF-S1-5791
