ಅತ್ಯಾಚಾರದ ಕರಾಳ ಕೂಗು
ರಚನೆ : ರಶ್ಮಿ ಹೆಗಡೆ
----------------------------------
ಅತ್ಯಾಚಾರದ ಕರಾಳ ಕೂಗು ಮೌನದ ಮಡಿಲಲಿ ಕೂಗೊಂದು ಮೊಳಗಿತು ಗೌಣದ ಕಡಲಲಿ ನಿಜವೊಂದು ಅಡಗಿತು ಅನ್ಯಾಯ ಹಣದ ಅಮಲಲಿ ಪಸರಿತು ನ್ಯಾಯ ಹೆಣ್ಣಿನ ಹೆಣದಲಿ ಮುಸುಕಿತು ಅತ್ಯಾಚಾರ ಬೀದಿ ಬೀದಿಯಲಿ ಜರುಗಿತು ಆಚಾರ ಬೂದಿ ಬೂದಿಯಲಿ ಮರುಗಿತು ಅನಾಚಾರ ಹಾದಿ ಹಾದಿಯಲಿ ಜನಿಸಿತು ವ್ಯಭಿಚಾರ ಆದಿ ಬುನಾದಿಯಲಿ ನರ್ತಿಸಿತು ಸಮಾಜವು ಹೋರಾಟದ ಹೆಸರಲಿ ಬೆದಕಿತು ಸಮಂಜಸವು ತೂರಾಟದ ಕೆಸರಲಿ ಹುದುಗಿತು ಕುಟುಂಬವು ಚುಚ್ಚು ಮಾತುಗಳಲಿ ಮುಡುಗಿತು ಕಟುಕನ ಛಾಯೆ ಹುಚ್ಚು ಜಾಲದಲಿ ಅಡಗಿತು
----------------------------------
ನೋಂದಣಿ ಐಡಿ : KPF-S1-5741
