ಪ್ರೇಮ ಭಾವದ ಕವನ
ರಚನೆ : ಕಲ್ಲೇಶ.ಎನ್.ಕೆ
----------------------------------
ಅಂದ ಚೆಂದದ ಚೆಲುವಿನ ಬೆಡಗಿ ನೀನು ಶೃಂಗರಿಸದ ಗೊಂಬೆಯಂತೆ ಮಿಂಚುವಳು ನೀನು ಎಡಬಿಡದೆ ಕಾಡುತಿಹಳು ಎನ್ನ ಹೃನ್ಮನದಲ್ಲಿ ನೀನು ನಿಸರ್ಗದ ದೇವತೆ ಇದ್ದಂತೆ ಕಾಣವಳು ನೀನು ಅವಳ ಮೊಗವು ಕಮಲದ ಮೊಗ್ಗುವಿನಂತೆ ಅವಳ ಮನಸ್ಸು ಮಲ್ಲಿಗೆ ಹರಳಿದ ಹೂವಿನಂತೆ ಅವಳ ಮಧುರವಾದ ಮಾತುಗಳು ಸವಿಜೇನಿನಂತೆ ಎರಡು ದೇಹ ಒಂದು ಮನಸ್ಸು ಎಂಬಂತೆ ಅಂದ ಚೆಂದದ ಚೆಲುವಿನ ಚಿತ್ತಾರ ನೀನು ನಿನ್ನ ಅಂತರಂಗದ ಭಾವನೆಗಳಿಗೆ ಸ್ಪಂದಿಸ್ವೇನು ನಾನು ಎನ್ನ ಹೃನ್ಮನದಲ್ಲಿ ಮಂದ ನಗೆ ಬೀರುವಳು ನೀನು ಕಾಣದ ಕಡಲಿಗೆ ಹಂಬಲಿಸಿದೆ ಎನ್ನ ಮನ ಆಗೊಮ್ಮೆ ಈಗೊಮ್ಮೆ ಕನಸ್ಸಿನಲ್ಲಿ ಕಾಡುತಿರುವಳು ನೀನು ಸಮುದ್ರದ ಹರಿವು ತಿರುವುಗಳನ್ನು ನೋಡಿದಾಕ್ಷಣ ನೆನಪಾಗುವುದು ನಿನ್ನ ಗುಣಗಾನ.
----------------------------------
ನೋಂದಣಿ ಐಡಿ : KPF-S1-5718
