Submission 21801

ನನ್ನ ಮನದ ಅರಸಿ

ರಚನೆ : ಸಂದೀಪ್ ಚೌಲಿಹಳ್ಳಿ

----------------------------------

ಜೀವನದ ದಾರಿಗೆ ಆಸರೆಯ ಭರವಸೆ ಮೂಡಿಸಿದವಳು, ಕನಸಿಗೂ ಒಂದು ಭರವಸೆಯ ಆಸರೆ ಬೇಕೆಂದವಳು, ಮನದ ಬೇಸರ ದೂರ ಮಾಡಿದವಳು, ಪ್ರೀತಿಯ ಹೊನಲು ಬೆಳಕಾದವಳು ನನ್ನ ಮನದ ಅರಸಿ. ಒಂಟಿ ಎಂದೇನಿಸಿದಾಗ.. ಜೊತೆಗಿದ್ದವಳು,ಗುರಿಯ ದಾರಿ ಕಾಣದಾಗ... ದಾರಿ ತೋರಿದವಳು,ಬೇಸರದ ಕ್ಷಣಗಳಿಗೆ ಸಂತೋಷದ ಕ್ಷಣವಾದವಳು, ಬದುಕಿನ ಭರವಸೆಯಾದವಳು ನನ್ನ ಮನದ ಅರಸಿ. ಅನಾಮಿಕನ ಬದುಕಿಗೆ ಬದುಕಿನ ಭಾಗವಾದವಳು, ನೊಂದ ಹೃದಯಕೆ ಹೃದಯದ ಒಡತಿಯಾದವಳು, ಪರಿಶುದ್ಧ ಪ್ರೇಮಕ್ಕೆ ಪ್ರೇಮದ ಸಿಂಚನ ತಂದವಳು, ಭಾಳ ಪಯಣಕ್ಕೆ ಸಂಗಾತಿಯಾದವಳು ನನ್ನ ಮನದ ಅರಸಿ.

----------------------------------

ನೋಂದಣಿ ಐಡಿ : KPF-S1-5683

32
Total Votes
109
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!