ನನ್ನವ್ವ
ರಚನೆ : ಮೌನೇಶ್ ಕೆ ಎಂ
----------------------------------
ಹಣ ಇಲ್ಲದಿದ್ರೆ ಏನಂತೆ ಮನತುಂಬಿ ಸಾಕ್ಯಲೆ ನನ್ನವ್ವ... ಆಸೆಗೆ ಒಲ್ಲೆ ಅನ್ಲಿಲ್ಲ... ಹಠಕ್ಕೆ ಸದೆ ಬಡಿದ್ಲಲ್ಲ.. ದುಃಖಕ್ಕೆ ಸಾವರ್ಸಿ ತೋರ್ಸ್ಯಲೆ ಜಗವ ಕಂಕ್ಳಲ್ಲೆ.. ಹೊತ್ಹೊತ್ತಿಗೆ ಊಟ... ಜೀವ್ನದ ಪಾಠ... ಹಂಚ್ಯಾಳೆ ಸಿರಿತನವ ತನ್ನ ನಗುವಲ್ಲೆ... ಅತ್ತಾಳ ಜಾರಿ ಬಿದ್ರೆ.. ಚಂದ ಅವ್ಳ ಸೆರಗಡಿಯ ನಿದ್ರೆ.. ಮುಟ್ಸ್ಯಾಳ ಗುರಿ ಕೈ ಹಿಡಿದು ತಾ ನಿಂತು ಮರೆಯಲ್ಲೇ... ಹಣ ಎಸ್ಟಿದ್ರೆ ಏನಂತೆ... ಆ ಶಿವನಿಗೂ ಆಗಿದೆ ಚಿಂತೆ.... ತಿರಿಸಲಗ್ದೆ... ತಾಯಿ ಋಣದ ಕಂತೆ ..
----------------------------------
ನೋಂದಣಿ ಐಡಿ : KPF-S1-5666
