ರಣಕಲಿ
ರಚನೆ : ಶೌರ್ಯ ಎ ಎಲ್
----------------------------------
ರಕುತದಿ ಬರೆದ ನರಬಲಿಯ ರಣಕಥನವಿದು, ರಕ್ಕಸನರೆದೆಯ ಸೆದೆ ಬಡಿದ ರಕ್ತಚರಿತೆ ಇದು., ಅಬ್ಬರಿಸಿದ ಬೊಬ್ಬಿರಿತಕೆ ಸಿಕ್ಕಿ ಸಿಲುಕಿದ ಶಿರಗಳೆಷ್ಟೋ, ನರಸಿಂಹನ ಘರ್ಜನೆಗೆ ನಲುಗಿದ ನರಗಳೆಷ್ಟೋ. ನೆತ್ತರಿನ ಅಭಿಷೇಕ ಹೆಜ್ಜೆ ಹೆಜ್ಜೆಗೆ, ಧರೆಗುರುಳಿವೆ ರುಂಡಗಳು ಕ್ಷಣ ಕ್ಷಣಕೆ. ಕಡು ಕೀಚಕ ರಣರೋಚಕ ರೌದ್ರ ಇವನ ತಾಣ, ಕಲಿಯುಗದ ಕಾರ್ಕೋಟಕ ಕಣಕಣದಿ ಪಾಷಾಣ, ಕರಿ ನಾಗರ ಕುಲದವನಿವ ಮಗ್ಗುಲಲ್ಲಿ ಮರಣ, ಕೆಂಗಣ್ಣಿನ ಕುದೃಷಿಗೆ ಮರುಕ್ಷಣವೇ ಪ್ರಾಣ ಹರಣ.
----------------------------------
ನೋಂದಣಿ ಐಡಿ : KPF-S1-5615
