ತಪ್ಪುವ ಮುನ್ನ -ಕೈತುತ್ತು ಅನ್ನ
ರಚನೆ : ಸಂಧ್ಯಾ ಎನ್,ಮಣಿನಾಲ್ಕೂರು
----------------------------------
ಪ್ರೀತಿಯ ಕೈತುತ್ತು ಉಣಿಸಿದ ಆ ಕೈಗಳು ನೆನಪಾಗಬೇಕು ತಪ್ಪು ಮಾಡುವ ಮುನ್ನ ಬಿದ್ದಾಗ ಆಡಿಸಿದ ಮುಗ್ಧ ಮನಸ್ಸನ್ನು ಧ್ಯಾನಿಸಬೇಕು ಕೆಟ್ಟ ಚಟಗಳಲ್ಲಿ ಬೀಳುವ ಮುನ್ನ ಅತ್ತಾಗ ಕಣ್ಣೀರು ಒರೆಸಿದ ಮೃದು ಹಸ್ತಗಳನ್ನು ಸ್ಮರಿಸಬೇಕು ಕಣ್ಣೀರು ಹಾಕಿಸುವ ಮುನ್ನ ನಿದ್ದೆಗೆ ತೊಟ್ಟಿಲಾದ ಬೆಚ್ಚಗಿನ ಮಡಿಲನ್ನು ಜ್ಞಾಪಿಸಬೇಕು ನೋವು ಕೊಡುವ ಮುನ್ನ ನವಮಾಸ ಹೊತ್ತ ಬೆಚ್ಚಗಿನ ಗರ್ಭಗುಡಿಗೆ ನೀನಾಗಬೇಕು ಕೈತುತ್ತು ಕೊಡುವ ಅನ್ನ
----------------------------------
ನೋಂದಣಿ ಐಡಿ : KPF-S1-5604
