Submission 21701

ಸಿರಿಧಾನ್ಯ

ರಚನೆ : ಪ್ರತಿಭಾ ಶಾಂತವೀರ ಚನಪನ್ನವರ

----------------------------------

ಪಿಜ್ಜಾ ಬರ್ಗರರ್ದಿಂದ ಶಕ್ತಿ ಬರೋದಿಲ್ಲೊ ತಮ್ಮಾ ಸಿರಿಧಾನ್ಯದ ಆಹಾರ ತಿಂದನೋಡೋ ತಮ್ಮಾ ಅರಿವಾಕ್ಕೇತಿ ನಿನಗ ಶಕ್ತಿಯ ಮರ್ಮ ಹೊಸಬಗೆಯ ತಿಂಡಿ ಹಲವಾರೋ ತಮ್ಮಾ ತಿಂದರ ಅಕ್ಕೇರಿ ನಡಿಲಾರದಷ್ಟು ಡುಮ್ಮಾ ಕುರುಕಲು ತಿಂಡಿ ತಿನ್ನಬ್ಯಾಡೋ ತಮ್ಮಾ ಸಿರಿಧಾನ್ಯದ ತಿಂಡಿ ತಿಂದನೋಡೋ ತಮ್ಮಾ ಬ್ರಾಂಡಿ ವಿಸ್ಕಿ ಕೂಡಿಬ್ಯಾಡೋ ತಮ್ಮಾ ಕರಳ ಸುಟ್ಟ ಹೊಗಿ ಹಾಕಿಸ್ಕೊಳ್ಳತಿ ತಮ್ಮಾ ಸಿರಿಧಾನ್ಯದ ಗಂಜಿ ಉಂಡು ಸಿರಿವಂತನಾಗೋ ತಮ್ಮಾ ಗೋಬಿ ಗೀಬಿ ತಿನ್ನಬ್ಯಾಡೋ ತಮ್ಮಾ ಗೋಧಿಯ ಬಳಸಿದ ಸಿರಿಧಾನ್ಯದ ಬಿಸ್ಕಿಟ್ ತಿಂಡನೋಡೋ ತಮ್ಮಾ ಸಿರಿಧಾನ್ಯದ ಆಹಾರ ತಿಂದ ನೋಡೋ ತಮ್ಮಾ ತಿಂದರ ಗೊತ್ತಕ್ಕೇತಿ ಸಿರಿಧಾನ್ಯದ ಮಹಿಮಾ

----------------------------------

ನೋಂದಣಿ ಐಡಿ : KPF-S1-5581

14
Total Votes
76
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!