ಎಚ್ಚೆತ್ತುಕೋ ಓ ಮನುಜ
ರಚನೆ : ನಿಶಾನ್ ಕರಿಂಕ
----------------------------------
ಹಣೆಬರಹ ಬರೆದವ ಗುಡಿಯೊಳಗೆ ಕಲ್ಲಾದ ಬರೆಸಿಕೊಂಡವ ಬರೆಯದನ್ನ ಬೇಡುತ್ತಾ ಮಣ್ಣಾದ ಕಪ್ಪು ಬಿಳುಪಿನ ಮಾಯೆಯಿದು ಮನಸ್ಸೇ ಕ್ಷಿಯ ಛಾಯೆಯಿದು ಬದುಕೆಂಬ ನಾಟಕದಲ್ಲಿ ಸೃಷ್ಟಿಕರ್ತನ ಆಟವಿದು ಬೀದಿಯ ಮಾರಿಯ ಏತಕೆ ಎಳೆಯುವೆ ನಿನ್ನ ಭವಿಷ್ಯವ ನೀನೇ ಕೊಲ್ಲುವೆ ಪಂಜರದಿಂದ ಹೊರಟ ಗಿಣಿ ನೀನು ಗರುಡನ ಜಾಲಕೆ ಸಿಲುಕಿದೆಯಾ ಎಚ್ಚೆತ್ತುಕೋ ಓ ಮನುಜ ಮರುಸೃಷ್ಟಿಸಿಕೋ ನಿನ್ನ ನಾಳೆಯ ಅಂದೇ ಕಾಣುವೆ ವಸಂತ ಕಾಲವ ಜೀವನದಲ್ಲಿ ಹರುಷದ ಚಿಗುರ
----------------------------------
ನೋಂದಣಿ ಐಡಿ : KPF-S1-5570
