ಜೀವನ ಪಯಣ
ರಚನೆ : ನವೀನ್ ಕುಮಾರ್ ಜಿ
----------------------------------
ಸಾಗಿತ್ತು ನನ್ನ ಸವಾರಿ ; ನಾನಿಲ್ಲದ ಹೊತ್ತಲ್ಲಿ ಚಂಡ ಮದ್ದಲೆ ಮುಂದೆ ; ಅಳುವ ಆಕ್ರಂದನ ಹಿಂದೆ ನಾ ಎದ್ದಾರೆ ಏನು ಮಾಡಲಿ...? ವಾಹನಕ್ಕೊಬ್ಬ ಸವಾರ; ಮಹಾಭಾರತದ ಕಾಲದಿಂದಲೂ ಬಿದಿರು ಬಂಡಿ ಮಾತ್ರ ಶ್ರೇಷ್ಠ ; ನಾಲ್ಕು ಸವಾರರ ಮೇಲೆ ನಾಕ-ನರಕಕ್ಕೆ ಅಂತಿಮ ಪಯಣ. ಆಕ್ರಂದನದ ಅಳುಗಾರಿಗೆ; ನಾನಿಲ್ಲದ ಜೀವನಕ್ಕೂ, ನನ್ನ ಭಾರ ಧರೆಯಿಂದ ದೂರವಾದಕ್ಕೂ. ಅಳುವ ಕಲೆ ಎರಡಕ್ಕೂ ಶ್ರೇಷ್ಠ. ದುಃಖಕ್ಕೂ ಸಂತೋಷದ ಆಡಂಬರಕ್ಕೂ. ಅಳುತ ಭುವಿಗೆ ನಾ ಬಂದನಂತೆ, ಹೊರಡುವಾಗಲು ನನ್ನವರು ಅಳುತ್ತಾರಂತೆ, ಅಳುವಿನ ಆದಿ- ಅಂತ್ಯದ ಪಯಣದ ಬಂಡಿ ನಗುತಾ ಸಾಗಲಿ, ನಗುತಾ ಸಾಗಲಿ, ನಗಿಸುತ್ತಲೇ ಸಾಗಲಿ...
----------------------------------
ನೋಂದಣಿ ಐಡಿ : KPF-S1-5566
