Submission 21489

ನನ್ನ ಪ್ರಪಂಚ

ರಚನೆ : ತಿಲಕಾ ಮಂಜುನಾಥ್ ಬೆಸೂರು

----------------------------------

ನನ್ನ ಪುಟ್ಟ ಪ್ರಪಂಚದ ಮಹಾರಾಜ ನನ್ನಪ್ಪ... ತಾ ಕಾಣದ ಜಗತ್ತನ್ನು ನಾ ಕಾಣಲಿ ಎಂದು ಬಯಸಿದವ ನನ್ನಪ್ಪ... ತನ್ನ ಜೀವನವನ್ನೇ ನನಗಾಗಿ ಮುಡಿಪಟ್ಟವ ನನ್ನಪ್ಪ... ಹಗಲಿರುಳು ಎನ್ನದೆ ದುಡಿದವರು ನನ್ನಪ್ಪ... ಕಾಣದ ದೇವರು ಕಲ್ಲಿನ ರೂಪದಲ್ಲಿದ್ದರೆ ನಾ ಕಂಡ ದೇವರು ಮನುಷ್ಯ ರೂಪದಲ್ಲಿರುವ ನನ್ನಪ್ಪ... ದುಡಿಯುವುದು 500 ಆದರೂ 50,000 ಈ ದಿನ ಶಾಲೆಗೆ ಸೇರಿಸಿದ್ದು ನನ್ನಪ್ಪ... ತಾನು ತಿಂದದ್ದು ತಂಗಳೂಟವಾದರೂ ನನಗೆ ರಸದೂಟ ತಿನ್ನಿಸಿದ್ದು ನನ್ನಪ್ಪ... ತಾನು 100ರೂನ ಹವಾಯಿ ಚಪ್ಪಲಿ ಹಾಕಿಕೊಂಡು ನನಗೆ ಬ್ರ್ಯಾಂಡೆಡ್ ಶೂಸ್ಗಳನ್ನು ಚಪ್ಪಲಿಗಳನ್ನು ಕೊಡಿಸಿದ್ದು ನನ್ನಪ್ಪ...... ತ್ಯಾಗಕ್ಕೆ ಮತ್ತೊಂದು ಹೆಸರು ನನ್ನ ಸ್ಪೂರ್ತಿ ನನ್ನಪ್ಪ....

----------------------------------

ನೋಂದಣಿ ಐಡಿ : KPF-S1-5444

28
Total Votes
108
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!