Submission 21197

ಹೊತ್ತಿಗೆಯೊಂದಿಗೆ ಹೊತ್ತು

ರಚನೆ : ಬಿಂದು . ಜೆ

----------------------------------

ಜೀವನವನರಿಯದ ಮನವು ಪುಸ್ತಕಗಳೊಂದಿಗೆ ಒಲವು ಕವಿಯ ಭಾವಪಾಕ ಸವಿಯುತಾ ಪದಪುಂಜಗಳ ಹೆಕ್ಕುತಾ. ಹೊತ್ತಿಗೆಯ ಒಡಲು ಕಬ್ಬಿಗನ ಭಾವಶರಧಿ ಮುಳುಗಿದರೂ ಉಸಿರಿದೆ ಅಕ್ಷರಗಳಿಂದಿಹ ಪುಟದಿ ಬರಹಗಳೇ ಮಾತಾಡಿಸುವಾಗ ಉತ್ತರವಿರದ ಮೌನರಾಗ ಹಾಳೆ ಹಾಳೆಯ ತಿರುವುವಾಗ ಅರಿತ ಬದುಕು ಹಸನವಾಗ . ಜನಮನದ ಗದ್ದಲ ಈ ಬದುಕು ನಿರಾಳತೆಯ ನಿರಂತತೆ ಪದಗಳ ಮೆಲುಕು. ಸಜ್ಜನಿಕೆಯ ಸರಳತೆ ಬಾಳಿಗೆ ಸರಿದಾರಿಯ ಸಖಿಯು ಹೊತ್ತಿಗೆ.

----------------------------------

ನೋಂದಣಿ ಐಡಿ : KPF-S1-5309

22
Total Votes
100
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!