Submission 21011

ಮುಟ್ಟಾದವಳ ಮನವ ಮುಟ್ಟು

ರಚನೆ : ವಿಜಯಕುಮಾರ್ ಹೆಚ್ ಎಸ್

----------------------------------

ಮುಟ್ಟು ಮುಟ್ಟೆಂದು ಮೂಗೇಕೆ ಮುರಿವೆ..? ಮುಟ್ಟಾದ ಹೆಣ್ಣನ್ನು ಮೂಲೆಗೆ ಬಿಡುವೆ; ಮುಟ್ಟು ಹರಿದು ನಿಂತ ಮೇಲೆ ತಾನೆ, ಗರ್ಭಧರಿಸಿ ನೀನು ಹುಟ್ಟಿದ್ದು ನರವೇ..! ಮುಟ್ಟಿಲ್ಲದೆ ಹುಟ್ಟಿಲ್ಲ, ಅದು ಹೆಣ್ಣಿಗೆ ಮರು ಹುಟ್ಟು ಮುಟ್ಟಿನ ಅನುಮಾನ ಮೊದಲು ಹೊರಗಟ್ಟು... ಅದುವೇ ಅವಳ ಜೀವನದ ಒಳ ಗುಟ್ಟು...! ಮುಟ್ಟಿನಾ ನೆತ್ತರೇ ಹರಿಯುತ್ತಿದೆ ನಮ್ಮಲ್ಲಿ ಮೂರು ದಿನಗಳು ಅವಳು ಮುಟ್ಟಿನ ಮಡುವಲ್ಲಿ; ಮುಟ್ಟಿನ ನಂತರ ಹುಟ್ಟಿದವರು ನಾವೆಲ್ಲಾ.. ಮುಟ್ಟಾದವಳ ಮುಟ್ಟಿದರೆ ಅದು ಮೈಲಿಗೆಯಲ್ಲಾ..! ಪೋಷಿಸು ಅವಳ ಭಾವವ ಅನುಮಾನಗಳ ಬಿಟ್ಟು, ನೆತ್ತರ ಹರಿಸುವವಳಿಗೆ ಪ್ರೀತಿಯ ಅಮೃತವನ್ನಿಟ್ಟು ಮುಟ್ಟಾದವಳ ಮನವ ಮೊದಲು ನೀ ಮುಟ್ಟು..!!

----------------------------------

ನೋಂದಣಿ ಐಡಿ : KPF-S1-5140

97
Total Votes
331
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!