Submission 20902

ನನ್ನವ

ರಚನೆ : ನಿರ್ಮಲಾ ಕಮರಿ

----------------------------------

ಇಲ್ಲಿ ನೀನ್ಯಾವ ರಾಜ್ಯವನ್ನು ಗೆಲ್ಲಲು ಬಂದಿಲ್ಲ ಆದರೂ ನನ್ನೆದೆಯ ಸಾಮ್ರಾಟನು ನೀನು ತಂಗಾಳಿಯೆ ಮುನ್ನುಡಿ ಬರೆದಿದೆ ನಮ್ಮಿಬ್ಬರ ಪ್ರತಿ ಭೇಟೆಗೂ... ಮಧುರವಾಗಿದೆ ಮೊಬೈಲುಗಳಿಲ್ಲದೆ ನಿನಗಾಗಿ ಕಾಯುತ ತುಸುದೂರ ನಿಲ್ಲಲೆ!? ಆ ಜನಜಂಗುಳಿಯ ಮಧ್ಯದಲಿ ತುಂಬಾ ಮುಜುಗುರದಿ ನಿನ್ನ‌ನ್ನೆ ನೋಡುತ ಮೋಡ ಕವಿದು ಮಳೆ ಬರುವಂತಾಗಿದೆ ನನ್ನವನಿಗೆ ಸ್ವಾಗತ ಕೋರಿ!! ನನ್ನ ಮುಂಗುರುಳಿಗು ಮನಸಾಗುತ್ತಿಲ್ಲ ನಿನ್ನ ಬಿಟ್ಟು ಹೊರಡಲು ಇಣುಕಿ ನೋಡುತ್ತಿದೆ ನೀ ಹಿಂತಿರುಗಿ ನೋಡುವೆಯಾ! ಎಂದು ಇಲ್ಲೇ ಎಲ್ಲೋ ಮರೆಯಲಿ ಕೂತು ನಮ್ಮನ್ನೇನೋಡಿದೆ ಕೋಗಿಲೆ ಮುಂದಿನ ವಸಂತಕ್ಕೆ ಈ ಹಾಡು ಹಾಡಲು...

----------------------------------

ನೋಂದಣಿ ಐಡಿ : KPF-S1-5023

2
Total Votes
32
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!