Submission 26831

ನಾಕ್ ಕವಡ್ಯಾಗಡ್ಗಿರೋ ಭವಿಷ್ಯ

ರಚನೆ : ವಿದ್ಯಾಶ್ರೀ. ಎಂ

----------------------------------

ನಾಕ್ ಕವಡೆ ಹಾಕ್ ಹೇಳ್ತರಂತಲ್ಲಪ್ಪೋ ಭೂತ - ಭವಿಷ್ಯ ನಾಕ್ ಕವಡೆ ಹಾಕಿ ಒಂದ್ ಜೀವ್ದ ಜೀವ್ನಾನ ನಿರ್ಧರಿಸಕಾಗ್ತದ???! ಸುಖಿದ್ದಾಗ್ ಇಲ್ದಿರೋ ಚಿಂತೆ, ಕಷ್ಟಿದ್ದಾಗ್ ಬರೋ ವಿಷ್ಯ ಇದ್ಕಾಗೆ ಊರಿಗೊಂದ್, ಕೇರಿಗೊಂದ್, ಕೈ ಗೆರೆ ಬೋರ್ಡ್ ಕಾಂತದ... ಗರ್ಭ ಗುಡ್ಯಾಗಿರೋ ದ್ಯಾವ್ರಿಗೂ ಗೊತ್ತಿಲ್ಲ ಈ ದೇವ್ದೂತ್ನ ರಹಸ್ಯ ಕಲ್ಯಿಯುಗ್ದಾಗ್ ಕಲ್ಲಾಗಿರೋ ದೈವಿದ್ನ ನೋಡ್ಕೊಂಡ್ ಮೂರ್ಛೆ ಹೋಗ್ತದ ನಂಗೊತ್ತು ಹೊಟ್ಟೆ ಪಾಡ್ಗೆ ನಡಿತ್ಯತೆ ಈ ಭವಿಷ್ಯದ ಹಾಸ್ಯ ತನ್ಹೊಟ್ಗಾಗಿ ಪಕ್ಕವ್ನ ಹೊಟ್ಟೊಡೊದ್ರೆ ಆ ದೈವ ಮೆಚ್ಚ್ತದ???? ನಾ ಮುಂದು, ತಾ ಮುಂದಂತ ಮುಗ್ಬಿದ್ದು ಕೇಳ್ತಾರಲ್ಲಪ್ಪೋ ಭವಿಷ್ಯ ಈ ಮರುಳ ಮಂದಿಗೆ ಮುಕ್ಕಣ್ಣನೇ ಬಂದ್ ಕಣ್ತೆರ್ಸ್ಬೇಕಾಗ್ಯದ ಸುಳ್ಳ ನಾ ಕಾಣೆ, ಸತ್ಯ ನಾ ಕಾಣೆ, ನಾ ತೃಣ ಮಾತ್ರದ್‌ ಮನುಷ್ಯ ವಿಜ್ಞಾನದ್‌ ಯುಗ್ದೊಳ್ಗೆ ಇದ್ನೆಲ್ಲಾ ನೋಡ್ಕೊಂಡ್ ಮನ್ಸು ಪೇಚಾಡ್ತದ.... ನಾಕ್ ಕವಡೆ ಹಾಕಿ ಅದ್ಹ್ಯಾಂಗ್ ಒಂದ್ ಜೀವ್ದ ಜೀವ್ನಾನ ನಿರ್ಧರಿಸಕಾಗ್ತದ???! ಜೀವ್ನಪೂರ ಸವಿಸೋ ಈ ಜೀವ ಅದ್ಹ್ಯಾಂಗ್ ಆ ನಾಕ್ ಕವಡ್ಯಾಗಡ್ಗೀರೋಕಾಗ್ದತ???!!!

----------------------------------

ನೋಂದಣಿ ಐಡಿ : KPF-S1-7140

3
Total Votes
16
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!