Submission 26821

ಕುವೆಂಪು..

ರಚನೆ : ಮನೋಜ್.ಎನ್. ಜವಳಿ

----------------------------------

ಕನ್ನಡ ಸಾಹಿತ್ಯ ಸರಸ್ವತಿಯ ಮಣಿಮುಕುಟವೇ ಕುವೆಂಪು ಇವರ ಕವಿತೆಗಳು ಕಿವಿಗೆ ಇಂಪು ಮನಕೆ ತಂಪು ಕನ್ನಡವನ್ನು ಉತ್ತಿ ಬಿತ್ತಿ ಬೆಳೆಸಿದ ನೇಗಿಲಯೋಗಿ ಪುಟ್ಟಮಕ್ಕಳ ಪ್ರೀತಿಯ ಬೊಮ್ಮನಹಳ್ಳಿಯ ಕಿಂದರಿಜೋಗಿ ಇವರೇ ನಾಯಕ ಕನ್ನಡ ಸಾಹಿತ್ಯ ದೋಣಿಯಲಿ ಅದ್ವಿತೀಯರಾಗಿ ಸಾಗುತಿಹರು ನಮ್ಮ ನೆನಪಿನ ದೋಣಿಯಲಿ ಕನ್ನಡ ಡಿಂಡಿಮವ ಬಾರಿಸಿದ ನಾಡಗೀತೆ ಜನಕ ಸಿರಿವಂತ ಕರುನಾಡಿಗೆ ಇವರೇ ಕನಕ ಸಿರಿಗನ್ನಡ ಸಾಹಿತ್ಯಕ್ಕೆ ಇವರೇ ಉದಯರವಿ ರಾಮಾಯಣವನೇ ಕನ್ನಡದಿ ರಚಿಸಿದ ಧೀಮಂತಕವಿ ಪದ್ಮಭೂಷಣ,ಕರ್ನಾಟಕರತ್ನ ಜ್ಞಾನಪೀಠದ ಮೆರಗು ಭಾರತಶ್ರೇಷ್ಠ ರಾಷ್ಟ್ರಕವಿಯ ಕವಿತೆಗಳೇ ಬೆರಗು ಮನೆ ಮನಗಳಲ್ಲಿ ಕನ್ನಡ ಹಣತೆ ಹಚ್ಚಿದ ರಸಋಷಿ ಪುಟ್ಟಪ್ಪರಿಂದ ಕನ್ನಡಾಂಬೆ ಭುವನೇಶ್ವರಿಯೂ ಖುಷಿ ಕನ್ನಡತನವನು ಕಣ ಕಣ ದಲ್ಲಿರಿಸಿದ ವಿಶ್ವಮಾನವ ಮನುಜಮತ ವಿಶ್ವಪಥ ಸಾರಿದ ದೇವಮಾನವ

----------------------------------

ನೋಂದಣಿ ಐಡಿ : KPF-S1-7147

1
Total Votes
10
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!