ಅಪ್ಪ
ರಚನೆ : ಮಂಜುಳಾ ಕೆ ಪಿ
----------------------------------
ಆಸೆ ಆಕಾಂಕ್ಷೆಗಳ ಅರಿವಿಲ್ಲದವ ಬಿಂಕ ಬಿಗುಮಾನಗಳ ಸಹಿಸದವ ಬೆಟ್ಟದಷ್ಟು ಪ್ರೀತಿಯನ್ನು ಹಂಚುವವ ತಾನು ಮಾತ್ರ ಏನೂ ಬಯಸದವ ಮಕ್ಕಳನ್ನು ಶ್ರೀಮಂತಿಕೆಯಲ್ಲಿ ಮೆರೆಸುವವ ಈತನೇ ಮಕ್ಕಳ ಶ್ರೀಮಂತ ಎಂಬುದ ಮರೆತವ ತಾನು ತನ್ನವರೆಂದು ಆಶಿಸುವವ ತನ್ನ ಕುಟುಂಬಕ್ಕೆ ಮುಖ್ಯ ಆದ್ಯತೆ ಕೊಟ್ಟವ ಸದಾ ನಗುಮುಖದ ಒಡೆಯನವ ಮಕ್ಕಳ ಏಳಿಗೆಗೆ ಸದಾ ಶ್ರಮಿಸುವ ಹೆಂಡತಿ ಮಕ್ಕಳೇ ತನ್ನ ಸರ್ವಸ್ವ ಎಂದವ ಗುಡಿಯೇ ಇಲ್ಲದ ನಿಜವಾದ ದೇವನಿವ ಗುಣವಂತರಾಗುವ ಅಷ್ಟ ಗುಣಗಳ ಕಲಿಸುವವ ಪ್ರತೀ ಮನೆಯ ಭದ್ರ ಬುನಾದಿ ಇವ
----------------------------------
ನೋಂದಣಿ ಐಡಿ : KPF-S1-6220
