ತಂಬಾಕು !! ಮಜಾ ಸಜಾ
ರಚನೆ : ಮಂಜುನಾಥ ನಿಂ ಸಜ್ಜನರ
----------------------------------
ಮಜವಾಗಿರುತ್ತೆ ಬಾಳ ಮಜವಾಗಿರುತ್ತೆ ಸಿಗರೇಟು ಸೇದುವಾಗ ಚನ್ನಾಗಿರುತ್ತೆ ಬರಬರತಾ ದೇಹಕ್ಕೆ ಒಂದೊಂದೇ ರೋಗ ಬಂದು ತಡೆಯಕಾಗದೆ ಪ್ರಾಣಪಕ್ಷಿ ಹಾರಿಹೋಗುತ್ತೆ ॥ಪ ॥ ಗಂಡು ಹೆಣ್ಣು ಬೇದ ಇಲ್ಲೆ ತಂಬಾಕು ತಿಂತಾರಲ್ಲ ದುಡ್ ಕೊಟ್ಟು ಎಲ್ಲಾರೂ ರೋಗಾನ ತರ್ತಾರಲ್ಲ ಚಟವನ್ನು ಕಲಿಯೋಕ್ ಮೊದಲು ಇರಬೇಕು ಎಚ್ಚರಿಕೆ ನಾಳಿಂದ ಬಿಟ್ಟಿಡತೀನಿ ಅನ್ನೋದೆಲ್ಲ ಬೂಟಾಟಿಕೆ ತರವಲ್ಲ ತಂಬಾಕು ಛಲದಿಂದ ಬಿಡಬೇಕು || ೧ || ಸಿಗರೇಟು ಬೀಡಿ, ಗಾಂಜಾ ಸೇದಬೇಡಿ ಗುಟಕಾ, ಮಾವಾ ಎಲ್ಲ ಟಾನಿಕ್ ಅನ್ನೊಬೇಡಿ ಚಟವೇನು ಚಟುವಟಿಕೆ ಮೂಲವಲ್ಲ ನೋಡಿ ದುಡ್ಡಿಂದ ಔಷದ ಸಿಕ್ರೂ ಆರೋಗ್ಯ ಸಿಗಲ್ಲ ಬಿಡಿ ಸ್ವಸ್ಥ ವಿಚಾರ, ಒಳ್ಳೆಯ ಜೀವನ - ಬದುಕಲು ಕಲಿಯೋಣ, ಇರೋದೊಂದು ಜೀವನ
----------------------------------
ನೋಂದಣಿ ಐಡಿ : KPF-S1-6213
