Submission 23037

ನಮ್ಮ ತಾಯ್ನಾಡು

ರಚನೆ : ರಾಧಿಕಾ ಬಿನಗೂರೆ.

----------------------------------

ಈಮನ ಪ್ರೀತಿ ಮಮತೆಯ ಭಾವ ಬಯಸೈತಿ, ಅದನ್ನು ಕರ್ನಾಟಕಾಂಬೆಯ ಮಡಿಲು ತೊರೆತಿ.. ಉಸಿರಾಡು ಗಾಳಿಲಿ ಗಂಧ ಬೆರತೈತಿ, ಅದಕ್ಕ ಇದು ಗಂಧದ ನಾಡು ಎನಿಸಿಕೊಂಡೈತಿ.. ಹಚ್ಚ-ಹಸಿರಿನಿಂದ ಸಹ್ಯಾದ್ರಿ ಮೆರೆದಿತಿ, ಇದನ್ನ ನೋಡಾಕ ಮನ ತುಂಬಿ ಬರತೈತಿ.. ಇಲ್ಲಿಯ ನೀರು ದನಿದವರ ಬಾಯಾರಿಕೆ ಆರಿಸೇತಿ, ಅದಕ್ಕ ಕಾವೇರಿ ಜೀವನದಿಯ ಪಾತ್ರದಲ್ಲೈತಿ.. ಬೆಳಗಾವಿ ಮಂದಿ ಮನಸ್ಸ ಸಕ್ಕರೆ ಐತಿ, ಅದಕ್ಕ ಬೆಳಗಾವಿ ಕುಂದಾ ಸಿಹಿ ಆಗೈತಿ.. ಚೆನ್ನವ್ವನ ಖಡ್ಗ ಬ್ರಿಟಿಷರ ಬೇವರ ಇಳಿಸೇತಿ, ರಾಯಣ್ಣನ ಘರ್ಜನೆ ಎದುರಾಳಿ ಎದೆಯಾಗ ನಡುಕ ತಂದೆತಿ.. ಕರುನಾಡಲ್ಲಿ ನಮ್ಮ ಜೀವಾಯಿತಿ, ಅದಕ್ಕ ನಾಡ ಗೌರವ ಉಳಿಸುವುದು ನಮ್ಮೆಲ್ಲರ ಜವಾಬ್ದಾರಿಯ ಐತಿ...

----------------------------------

ನೋಂದಣಿ ಐಡಿ : KPF-S1-6206

0
Total Votes
1
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!