ಆದರ್ಶ ಶಿಕ್ಷಕ
ರಚನೆ : ಸೋನಿ ಪ್ರ ಝಿಂಗಾಡೆ
----------------------------------
ಪ್ರತಿಯೊಬ್ಬರ ಜೀವನ ನಿರ್ಮಾಪಕ ನಿಸ್ವಾರ್ಥ ಸೇವೆಗೈಯುವ ಸೇವಕ ದೇಶವನ್ನು ಕಾಯುವ ರಕ್ಷಕ ಇವರೇ ವಿದ್ಯೆ ಕಲಿಸುವ ಶಿಕ್ಷಕ ಉತ್ತಮ ಸಮಾಜ ನಿರ್ಮಾಣ ಇವರ ಗುರಿ ಆಗುವರು ಎಲ್ಲ ವಿದ್ಯಾರ್ಥಿಗಳಿಗೆ ಮಾದರಿ ಖಾಲಿ ಮೆದುಳನ್ನು ಜ್ಞಾನದಿಂದ ತುಂಬಿ ಕೊಟ್ಟ ಓ ಗುರುವೆ ನೀನು ನಿಜಕ್ಕೂ ಬೆಟ್ಟ ತಾರತಮ್ಯ ಅರಿಯದಿರುವುದು ಇವರ ಸಾಧನೆ ಸಕಲ ಸಮಸ್ಯೆಗಳಿಗೂ ಪರಿಹಾರ ನೀಡೋ ದೇವರೇ ವಿದ್ಯಾರ್ಥಿಗಳ ಪಾಲಿಗೆ ಸರ್ವವೂ ನೀವೇ ಶಿಷ್ಯರ ಸಾಧನೆಯೇ ನಿಮಗಾಗಿ ಸಮರ್ಪಣೆ ವಿದ್ಯಾರ್ಥಿಗಳೆದುರು ಇವರು ಅಶೋಕ ವಿದ್ಯಾರ್ಜನೆಗಾಗಿಯೇ ಬದುಕು ಸಮರ್ಪಕ ಇಂತಹ ಗುರುವಿಗಿರುವ ಬಿರುದೇ ಆದರ್ಶ ಶಿಕ್ಷಕ...ಆದರ್ಶ ಶಿಕ್ಷಕ
----------------------------------
ನೋಂದಣಿ ಐಡಿ : KPF-S1-6185
