Submission 22772

ನೆಲೆಯಿಲ್ಲದ ಎಲ್ಲೆ.

ರಚನೆ : ಪ್ರಿಯಾಂಕ ಕೆ ಎಸ್

----------------------------------

ಭದ್ರವಾಗಿರುವೆ ಅಮ್ಮನ ಸೆರಗಂಚಿನ ನಾಣದಷ್ಟು ಧೈರ್ಯವಾಗಿರುವೆ ಅಪ್ಪನ ಕಿಸೆಯಲಿ ಕುಂತ ಲೇಖನಿಯಷ್ಟು ಸಂಯಮದಿಂದಿರುವೆ ಶೃತಿ ಲಯ ಸೇರಿದ ಹಾಡಿನಷ್ಟು ಗುಟ್ಟಾಗಿರುವೆ ಅಂಗೈ ರೇಖೆಯಲಿ ಅಡಗಿರುವ ಭವಿಷ್ಯದಷ್ಟು ಶಾಂತವಾಗಿರುವೆ ನನ್ನ ಕೋಣೆಯಲ್ಲಿಯ ನಿಶ್ಯಬ್ದದಷ್ಟು ಎಲ್ಲಾ ಸಾಲುಗಳು ಸರಿಯಿದ್ದರೂ ಪ್ರಶ್ನೆಯೊಂದೇ, ಬದುಕು ಪದ ಪಲ್ಲಟಗೊಂಡ ಪಂಕ್ತಿಯಾಗಿದೆಯಾ ಎಲ್ಲರೂ ಕೇಳುವ ಪ್ರಶ್ನೆಗಳಷ್ಟು , ಪ್ರಶ್ನಾರ್ಥಕವಾಗಿದೆಯಾ? ಬಹುಶಃ ಪ್ರಶ್ನಾರ್ಥಕವಾಗೇ ಉಳಿಯಬಹುದು ನೆಲೆಯಿಲ್ಲದ ಎಲ್ಲೆಗೆ ಕಲ್ಲಾಕುವ ಮನಸ್ಸಿರುವಾಗ.

----------------------------------

ನೋಂದಣಿ ಐಡಿ : KPF-S1-6183

0
Total Votes
2
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!