Submission 22636

ಅಕ್ಷಯ ಪಾತ್ರೆ

ರಚನೆ : ಅರುಣ್ ಕುಮಾರ್ ಪುಷ್ಪದಂತ

----------------------------------

ಜೀವ ಉಳಿಸುವ ಈ ಹೊಸಜೀವ ಸೃಷ್ಠಿಯೇ ನಿನೊಮ್ಮೆ ಕಾಯಾಗಿ, ಹಣ್ಣಾಗಿ ಹಣ್ಣು ಮಾಗುವ ಹೊತ್ತೆ ನೀ ಜೀವನಾಡಿ, ಜೀವ ಉಳಿಸುವ ಕಾಯ ನೀನು ಅಮ್ಮ ಅವರಮ್ಮ ಕೈ ಚಳಕದಲಿ ಇಡೀ ಜಗದ ಜೀವಬಿಂದುವಿದೆ ಈ ಜೀವ, ಆ ಉಸಿರು ಅಮ್ಮ ಅಜ್ಜಿ ಇಬ್ಬರು ಸೇರಿಮಾಡಿದ್ದು ಇಬ್ಬರು ಜೀವವೈದ್ಯರೆ ಸರಿ ಭೂ ಮಂಡಲದ ಭೂ ಗರ್ಭದೊಳಗೆಲ್ಲ ಜೀವ ಉಳಿಸಿದವರದ್ದೆ ಮಾತು,ಮೌನ! ಈಗ ಅಕ್ಷಯ ಪಾತ್ರೆಯೇ ತುಂಬಿ ಜೀವಕಳೆ ಹರಿಯುವ ಹೊತ್ತು ಹೀಗೆ ಅನಾದಿ ಕಾಲದಿಂದ ಹೂ, ಕಾಯಿ, ಹಣ್ಣು, ಎಲ್ಲವೂ ಮಾಗಿ ಮೈ ಮನದ ತುಂಬೆಲ್ಲಾ ಹರಡಿ ನಗುವೆಂಬ ಜೀವ ಚಿಲುಮೆ ಚಿಗುರೊಡೆದಿದೆ ಇದು ಅಮ್ಮ ಅವರಮ್ಮನ ಕಥೆ ದಶಕಗಳ ಕಥೆ ಭೂತ,ಭವಿಷ್ಯಗಳ, ಮೀರಿ ಕಾಲಕಾಲಕ್ಕೂ ಇದು ಹಸಿರಬೆರಸಿ ಉಸಿರಬೆರೆಸಿದೆ ಇದೊಂದು ಜೀವವೈದ್ಯರ ಬದುಕಿನ ಗಾಥೆಯಷ್ಟೆ

----------------------------------

ನೋಂದಣಿ ಐಡಿ : KPF-S1-6168

11
Total Votes
29
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!