ಕಲ್ಪನೆಯ ಆಕೆ
ರಚನೆ : ರಾಜೇಶ ಶೆಟ್ಟಿ ಸಂಪಿಗೆಖಾನ
----------------------------------
ಅವಳೊಂದು ಶ್ರೀಗಂಧದ ಗೊಂಬೆ ನಾನಾಡೊ ಮಾತಿನ ಮಾಧುರ್ಯ ಅವಳು ಬಾನಿಂದ ಮುತ್ತಿಕ್ಕೊ ಶ್ರೀ ಗಂಗೆಯಂತೆ ನನ್ನ ಬದುಕ ಬೆಳಗೋ ಪಾವನೆಯಾಕೆ... ಆ ದೇವರನ್ನೊಮ್ಮೆ ಎಲ್ಲಾರು ಕೇಳಿರಿ ಈ ರೂಪಕ್ಕೆ ಸರಿಸಾಟಿ ಉಂಟೆ ಹೇಳಿರಿ ಗಿರಿ ಹಿಮಾಲಯ ಆ ಕಂಗಳ ಲಯ ಕೈಲಾಸ ಶಿಖರವೇ ಅವಳ ಜಡೆ ಆಗಸದ ಬಿಳಿ ಮೋಡ ತೊಟ್ಟ ಮಲ್ಲಿಗೆ ನೀಲಿ ಸಾಗರವೇ ಕೋಮಲ ಕಾಲ್ಗೆಜ್ಜೆ ಆ ಭ್ರಹ್ಮನ ಯಾರಾರು ಕರೆಯಿರಿ ನನ್ನೊಡತಿಗೆ ದ್ರಷ್ಟಿ ಬೊಟ್ಟನ್ನೊಂದು ಹಾಕಿರಿ ದೇವಲೋಕ ಮೇಘಪುಷ್ಪ ತನ್ನಿರಿ ದೇವೆಂದ್ರನನ್ನು ಬರುವಂತೆ ಕರೆಯಿರಿ "ಕಲ್ಪನೆಯ ಆಕೆ" ಸಿಕ್ಕರೆ ಈ ಕವಿತೆ ನಾ ಕೊಟ್ಟೆ ಅನ್ನಿರಿ..
----------------------------------
ನೋಂದಣಿ ಐಡಿ : KPF-S1-6132
