ನನ್ನ ಅಪ್ಪ
ರಚನೆ : ರಾಜೇಶ್ವರಿ ಸುರೇಶಗೌಡ ಮುದಿಬಸನಗೌಡ್ರ
----------------------------------
ನೀನು ಕೆಲಸ ಮಾಡು ಅಂತ ಬೈಲಿಲ್ಲ ನನ್ನ ಅಪ್ಪ ಮಗಳು ರಾಣಿ ಹಂಗೆ ಇರ್ಲಿ ಅಂದ ನನ್ನ ಅಪ್ಪ | ಹೆಣ್ಣಮಗಳುಶಾಲೇಗೆ ಹೋಗ್ಬೇಡಅಂತ ಹೇಳಿಲ್ಲ ನನ್ನ ಅಪ್ಪ ಶಾಲೆಗೆ ಹೋಗಿ ದೊಡ್ಡ ವ್ಯಕ್ತಿಆಗು ಅಂದ ನನ್ನ ಅಪ್ಪ | ಚೆನ್ನಾಗಿ ಓದಿಲ್ಲ ಅಂತ ಬೈದಿಲ್ಲ ನನ್ನ ಅಪ್ಪ ನಂಗೆ ನೀನು ಮುಖ್ಯ ಅಂದ ನನ್ನಪ್ಪ | ನೀನು ದುಡಿ ಅಂತ ಹೇಳಿಲ್ಲ ನನ್ನ ಅಪ್ಪ ಇದ್ದುದ್ರಲ್ಲೇ ಖುಷಿ ಪಡೋಣ ಅಂದ ನನ್ನ ಅಪ್ಪ | ನಿನಗೆ ಎಷ್ಟು ಸಂಬಳ ಅಂತ ಕೇಳಿಲ್ಲ ನನ್ನ ಅಪ್ಪ ನಿನಗೆ ಖುಷಿ ಇದೆಯಾ ಅಂತ ಕೇಳಿದ ನನ್ನ ಅಪ್ಪ ಹೇಗಿದ್ದೀಯ ಮಗಳೇ ಅಂತ ಕೇಳಿಲ್ಲ ನನ್ನ ಅಪ್ಪ ಖರ್ಚಿಗೆ ದುಡ್ಡು ಬೇಕಾ ಅಂತ ಕೇಳಿದ ನನ್ನ ಅಪ್ಪ ತನ್ನ ನೋವು ಯಾರಿಗೂ ಹೇಳಿಲ್ಲ ನನ್ನ ಅಪ್ಪ ನೀವು ಖುಷಿಯಾಗಿದ್ದೀರಾ ಅಂತ ಕೇಳಿದ ನನ್ನ ಅಪ್ಪ
----------------------------------
ನೋಂದಣಿ ಐಡಿ : KPF-S1-6039
