ಕನ್ನಡ ನಾಡು - ನುಡಿ ( ವಾರ್ಧಕ ಷಟ್ಪದಿ )
ರಚನೆ : ಚಿನ್ಮಯ ಅನಂತ ಹೆಗಡೆ ದಂತಳಿಗೆ
----------------------------------
ಕನ್ನಡವ ಸಾದರದಿ ಮನದಲೇ ಪೂಜಿಸುತ | ಕನ್ನಡವನುಳಿಸಲೋಸುಗ ನಾವು ಬದುಕಿದೊಡೆ| ಇನ್ನು ಸಾರ್ಥಕ ನಮ್ಮದೀ ಬದುಕು ಪೃಥ್ವಿಯಲಿ ತಿಳಿದಿದನು ಅನುಸರಿಸುವಾ || ಕನ್ನಡವು ವೇದಕ್ಕೆ ಸಮನೆಂದು ತಿಳಿಯುತಲಿ | ಕನ್ನಡದ ಪದಗಳನು ಚಂದವಾಗಿಯೆ ಬಳಸಿ| ಕನ್ನಡಾಂಬೆಯ ಪರಮ ಪದಯುಗಕೆ ವಂದಿಸುವ ಅನುದಿನವು ಭಕ್ತಿಯಿಂದ|| ಕರುನಾಡ ಬಾವುಟದಿ ಅರಿಶಿನವು ಕುಂಕುಮವು | ಮೆರೆದು ಕಂಗೊಳಿಸುತಲಿ ಅಂದವಂ ಹೆಚ್ಚಿಸಿದೆ | ತೆರೆದು ಸುಜ್ಞಾನದಾ ಕಂಗಳೊಳಗದ ನೋಡಿ ತೊರೆವ ಅಜ್ಞಾನವನ್ನು || ಹರಿಯುತಿದೆ ಕಾವೇರಿ ಝುಳುಝುಳೂ ನಾದದಲಿ | ಸರಿತದಾ ನಾದವದು ಮುಗಿಲನ್ನೆ ಮುಟ್ಟುತಿದೆ | ಗಿರಿ ಶಿಖರಗಳಲಿ ತರುಲತೆಗಳೂ ಒಗ್ಗೂಡಿ ಸಾಮರಸ್ಯದಿ ನಗುತಿವೆ ||
----------------------------------
ನೋಂದಣಿ ಐಡಿ : KPF-S1-5959
