ನನ್ನ ಪ್ರಪಂಚ, ನನ್ನ ಅಮ್ಮ
ರಚನೆ : ಪವಿತ್ರಾ ಸಿದ್ರಾಮಪ್ಪ ದುಮ್ಮದ್ರಿ
----------------------------------
ನಿನ್ನ ಮಡಿಲು ಚಂದನ ಬೀಡು, ನಿನ್ನ ಕನಸು ಹೃದಯದ ವೀಣು. ನೀನೆ ಆಗಸ, ನೀನೆ ಭೂಮಿ, ನೀನೆ ಬದುಕಿಗೆ ದೀಪದ ಜ್ಯೋತಿ! ನಿನ್ನ ಮಡಿಲಲ್ಲಿ ಮಲಗಿದಾಗ, ಮತ್ತೆ ಪುಟ್ಟ ಮಗು ಆಗುವೆನು. ನಿನ್ನ ಎದೆಯ ಮಧುರ ತಾಳದಲಿ, ನನ್ನ ಕನಸುಗಳ ಹಾರಿ ಹೋಗುವೆನು. ನಿನ್ನ ನಗು ಚಂದಿರದ ಬೆಳ್ಳಿ, ನಿನ್ನ ಮಾತು ಮೌನದ ಚಳಿ. ನೀನೇ ನನ್ನ ಬದುಕಿನ ರಾಗ, ನಿನ್ನ ಹೆಜ್ಜೆಯಲ್ಲಿ ಬೆಳಕಿನ ಭಾಗ! ನಿನ್ನ ಕೈಯ ಸಿಹಿ ಅಡುಗೆ, ನನ್ನ ಬಾಲ್ಯದ ನೆನಪುಗಳ ದಾರಿಯಲಿ. ನಿನ್ನ ಪ್ರೀತಿ, ನಿನ್ನ ಮೌನ, ಎಲ್ಲವೂ ನನಗೆ ಗಾದಿಯಲಿ. ನಾ ಅತ್ತರೆ ನಿನಗೆ ತಳಮಳ, ನಾ ನಗುತ್ತಿದ್ದರೆ ಹಬ್ಬ. ನಿನ್ನ ಒಡಲಲಿ ಬೆಳೆದು ಬಂದೆ, ನಿನ್ನ ಉಸಿರಲಿ ಜೀವಿಸಿದೆ. ಅಮ್ಮಾ, ನಿನ್ನ ಪ್ರೀತಿ ಅಮೃತ, ನಿನ್ನ ಪ್ರೀತಿ ಶಾಶ್ವತ ನಿನ್ನ ಮಾತು ಮನಕೆ ಸತ್ಯ, ನೀನಿಲ್ಲದ ಬಾಳು ಮಿತ್ಯ. ನಿನ್ನ ಆಶೀರ್ವಾದ ಧಾರೆ ಧಾರೆ, ನಿನ್ನ ಮಮತೆ ಎಂದೂ ತಾರೆ. ನೀನು ಇರುವೆ ಎನ್ನುವುದೇ ನನಗೆ ಧೈರ್ಯ , ನಿನ್ನ ಪ್ರೀತಿಗೆ ಸಿಗದು ಪಾರೆ!
----------------------------------
ನೋಂದಣಿ ಐಡಿ : KPF-S1-5809
