Submission 21919

ಪ್ರೇಮದ ಆರ್ಥನಾದ!

ರಚನೆ : ಆರ್ ಬಸವರಾಜ

----------------------------------

ನೀನಲ್ಲವೇ ನನ್ನ ಬದುಕಿನಲ್ಲಿ ಬೇರೂರಿ ಚಿಗುರೊಡೆಯಲು ಬಂದವಳು ? ಆದರೀಗೇಕೆ ಕಾರಣಗಳ ಪ್ರಸ್ತಾಪಿಸುತ್ತಿರುವೆ? ಶಾಶ್ವತವಾಗಿ ನೆಲಸ ಬಯಸಿದ ಹೃದಯದಿಂದೇಕೆ ಅದೃಶ್ಯವಾಗುವ ಮಾತಾಡುತ್ತಿರುವೆ ಹೇಳು ಓ ಗೆಳತಿ? ನನ್ನ ಹೃದಯದ ಒಲವಿನ ಪುಟದ ಮೇಲೆ ನೀನು ರುಜುಮಾಡಿದಂದಾಗಿನಿಂದ ನನ್ನ ಹೃದಯದಲ್ಲಿ ರೋಮಾಂಚನದ ಸೆಳೆತವಾಗಿದೆ ಈ ಚಮತ್ಕಾರಕ್ಕೆ ನನ್ನ ಹೃದಯವು ಒಳಗಾಗಿ ನಿನ್ನನ್ನೇ ಬೇಕೆನ್ನುತ್ತಿರಲು ನೀನೇಕೆ ದೂರಾದೆ ಓ ಗೆಳತಿ? ನೀನು ಮಾಡಿದ ರುಜು ನನ್ನ ಹೃದಯವನ್ನು ಘಾಸಿಗೊಳಿಸಿ ಅನುಭವಿಸಲಾಗದ ನೋವುಂಟು ಮಾಡಿಬಿಟ್ಟಿದೆ ಗಾಯಗೊಂಡ ಹೃದಯವು ವಾಸಿಯಾಗಲಾರದ ನೋವಿನಿಂದಿರಲು ನಿನ್ನಲ್ಲಿ ಕರುಣೆಯಾದಾರೂ ಗತಿಸಲಿಲ್ಲವೇ ಓ ಗೆಳತಿ?

----------------------------------

ನೋಂದಣಿ ಐಡಿ : KPF-S1-5760

36
Total Votes
192
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!