ನನ್ನೊಳಗೆ ನಾನು
ಮನದೊಳಗೆ ತುಂಬಿದ ಕಸಿವಿಸಿ
ಹೊತ್ತಿಹುದು ಒಡಲ ಒಳಗೆ
ಭುಗಿಲೆದ್ದಿಹುದು ಬೆಂಕಿಯ ಜ್ವಾಲೆ
ಆದರೂ ಹೊರಹಾಕಲೊಲ್ಲದು ನಾಲಿಗೆ
ಈ ಲೋಕವ ಸುತ್ತೊಡೆದು ಬಂದಿಹೆ
ಎಲ್ಲೆಲ್ಲೂ ರೋದನದ ಮುಖುಟ ಮಾಲೆ
ಸತ್ಯವ ಆಘ್ರಾಣಿಸುವ ಶಕ್ತಿ ಪಡೆದಿರುವೆ
ಇದರ ಮುಂದೆ ನನದೇನೂ ಅಲ್ಲ, ಅಲ್ಲವೇ..!?
ನನ್ನೊಳಗೆ ನಾನು
ಮನದೊಳಗೆ ತುಂಬಿದ ಕಸಿವಿಸಿ
ಹೊತ್ತಿಹುದು ಒಡಲ ಒಳಗೆ
ಭುಗಿಲೆದ್ದಿಹುದು ಬೆಂಕಿಯ ಜ್ವಾಲೆ
ಆದರೂ ಹೊರಹಾಕಲೊಲ್ಲದು ನಾಲಿಗೆ
ಈ ಲೋಕವ ಸುತ್ತೊಡೆದು ಬಂದಿಹೆ
ಎಲ್ಲೆಲ್ಲೂ ರೋದನದ ಮುಖುಟ ಮಾಲೆ
ಸತ್ಯವ ಆಘ್ರಾಣಿಸುವ ಶಕ್ತಿ ಪಡೆದಿರುವೆ
ಇದರ ಮುಂದೆ ನನದೇನೂ ಅಲ್ಲ, ಅಲ್ಲವೇ..!?